ಜಾರಿಗೊಳಿಸಬಹುದಾದ ವೇತನ ಒಪ್ಪಂದ(ಎನ್ಫೋರ್ಸೆಬಲ್ ವೇಜ್ ಅಗ್ರಿಮೆಂಟ್) 

ಜಾರಿಗೊಳಿಸಬಹುದಾದ ವೇತನ ಒಪ್ಪಂದ ಎಂದರೇನು? 

ಜಾರಿಗೊಳಿಸಬಹುದಾದ ವೇತನ ಒಪ್ಪಂದ (ಇಡಬ್ಲ್ಯೂಎ) ಜಾಗತಿಕ, ಕಾನೂನುಬದ್ಧ ಒಪ್ಪಂದವಾಗಿದ್ದು, ಟ್ರೇಡ್ ಯೂನಿಯನ್ ಸಂಸ್ಥೆಗಳು ಮತ್ತು ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳು ಮತ್ತು ಉಡುಪು ಮತ್ತು ಪಾದರಕ್ಷೆ ಉದ್ಯಮದಲ್ಲಿನ ರೀಟೇಲ್ ವ್ಯಾಪಾರಿಗಳು ಈ ಕುರಿತು ಮಾತುಕತೆ ನಡೆಸಿ, ಸಹಿ ಮಾಡಲಿದ್ದಾರೆ. ಈ ಕಂಪನಿಗಳಿಗೆ ಬೇಕಾದ ಉತ್ಪನ್ನಗಳನ್ನು ತಯಾರಿಸುವ ಕಾರ್ಮಿಕರು ತಮ್ಮ ಮತ್ತು ತಮ್ಮ ಕುಟುಂಬಗಳ ಮೂಲಭೂತ ಅಗತ್ಯಗಳನ್ನು ಪೂರೈಸಲು ಸಾಕಾಗುವಷ್ಟು ಜೀವನಾವಶ್ಯಕ ವೇತನವನ್ನು ಪಡೆಯುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಜಾರಿಗೊಳಿಸಬಹುದಾದ ವೇತನ ಒಪ್ಪಂದವನ್ನು ಬಾಂಗ್ಲಾದೇಶದ ಅಗ್ನಿ ಮತ್ತು ಕಟ್ಟಡ ಸುರಕ್ಷತೆಯ ಒಪ್ಪಂದ ಮತ್ತು ಯುನೈಟೆಡ್ ಸ್ಟೇಟ್ಸ್ ನ ನ್ಯಾಯಯುತ ಆಹಾರ ಕಾರ್ಯಕ್ರಮದ ಅನುಭವಗಳ ಮೇಲೆ ಅಭಿವೃದ್ದಿಪಡಿಸಲಾಗಿದೆ.

ಇದರಲ್ಲಿ ಪೂರೈಕೆದಾರರ ಭಾಗ ಏನ? ಅವರ ಇಡಬ್ಲ್ಯೂಎಗೆ ಸಹಿ ಹಾಕುತ್ತಾರೆಯೇ?

ಇಡಬ್ಲ್ಯೂಎಗೆ ಬ್ರ್ಯಾಂಡ್‌ಗಳು ಮತ್ತು ರೀಟೇಲ್ ವ್ಯಾಪಾರಿಗಳು ಸಹಿ ಹಾಕುತ್ತಾರೆ. ಆದರೆ ಅವರ ಖರೀದಿಯ ಒಪ್ಪಂದದಲ್ಲಿ, ಪ್ರತಿ ಸರಬರಾಜುದಾರರು ಕಾರ್ಖಾನೆಯಲ್ಲಿ ಸಕ್ರಿಯವಾಗಿರುವ ಸ್ಥಳೀಯ ಕಾರ್ಮಿಕ ಒಕ್ಕೂಟದೊಂದಿಗೆ ಪ್ರತ್ಯೇಕ ಒಪ್ಪಂದವನ್ನು ಮಾಡಿಕೊಳ್ಳಬೇಕು ಎಂಬ ಷರತ್ತು ಇರುತ್ತದೆ. ಈ ಕುರಿತು ಹೆಚ್ಚು ತಿಳಿಯಲು ‘ಪೂರೈಕೆದಾರರ ಹೊಣೆಗಳು’ ವಿಭಾಗವನ್ನು ಸಹ ನೋಡಿ.

ಸಹಿದಾರ ಒಕ್ಕೂಟಗಳು ಮತ್ತು ಎನ್ಜಿಒಗಳ ಪಾತ್ರ

ಮಾತುಕತೆ ನಡೆಸುವ ಮತ್ತು ಒಪ್ಪಂದಕ್ಕೆ ಸಹಿ ಮಾಡುವ ಯೂನಿಯನ್ ಪ್ರತಿನಿಧಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಮತ್ತು ಇದರಲ್ಲಿ ಅಂತರರಾಷ್ಟ್ರೀಯ ಎನ್‌ಜಿಒಗಳ ಪಾತ್ರವೇನು?

ಸಮಾಲೋಚನಾ ಪ್ರಕ್ರಿಯೆಯ ಭಾಗವಾಗಲು, ರಾಷ್ಟ್ರೀಯ ಯೂನಿಯನ್ ಫೆಡರೇಷನ್‌ಗಳು ಮತ್ತು ಫೆಡರೇಶನ್‌ನೊಂದಿಗೆ ಸಂಬಂಧವಿಲ್ಲದ ಕಾರ್ಖಾನೆ ಮಟ್ಟದ ಒಕ್ಕೂಟಗಳು ರಾಷ್ಟ್ರೀಯ ಕರಾರು ಗುಂಪಿನ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತವೆ. ಈ ಗುಂಪು ಕನಿಷ್ಠ 2 ಮತ್ತು ಗರಿಷ್ಠ 3 ಟ್ರೇಡ್ ಯೂನಿಯನ್ ಪ್ರತಿನಿಧಿಗಳನ್ನು, ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಅದನ್ನು ಅನುಮೋದಿಸಬೇಕಾದ ಜಾಗತಿಕ ಕರಾರು ಮಂಡಳಿಗೆ ನಾಮನಿರ್ದೇಶನ ಮಾಡುತ್ತದೆ. ಕೌನ್ಸಿಲ್ಸ್ ನ ನಾಮನಿರ್ದೇಶಿತ ಕಾರ್ಮಿಕ ಸಂಘಗಳು ಮತ್ತು ಎನ್ಜಿಒಗಳ ಗುಂಪನ್ನು ಒಳಗೊಂಡಿರುವ ಜಾಗತಿಕ ಕರಾರು ಸಮಿತಿಯು ನೇರ ಮಾತುಕತೆ ನಡೆಸುವ ಮತ್ತು ಸಹಿ ಮಾಡುವ ಅಂಗವಾಗಿದೆ. ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಎಲ್ಲಾ ರಾಷ್ಟ್ರೀಯ ಯೂನಿಯನ್ ಫೆಡರೇಷನ್‌ಗಳು ಮತ್ತು ಕಾರ್ಖಾನೆ ಒಕ್ಕೂಟಗಳ ಪಟ್ಟಿಯನ್ನು ಒಪ್ಪಂದದ ಕೊನೆಯಲ್ಲಿ(ಅನೆಕ್ಸ್) ಸೇರಿಸಲಾಗುತ್ತದೆ. ಈ ಒಕ್ಕೂಟಗಳು ಸರಬರಾಜುದಾರರೊಂದಿಗೆ ಪ್ರತ್ಯೇಕ ಒಪ್ಪಂದಗಳ ಬಗ್ಗೆ ಮಾತುಕತೆ ನಡೆಸುತ್ತವೆ. ಸರಬರಾಜುದಾರರು ನಿರಾಕರಿಸಿದರೆ, ಅನೆಕ್ಸ್ ಮೂಲಕ ಇದರ ಭಾಗವಾಗಿರುವ ಈ ಒಕ್ಕೂಟಗಳು ಇಡಬ್ಲ್ಯೂಎ ಅಡಿಯಲ್ಲಿ ಕ್ರಮಕ್ಕೆ ಮುಂದಾಗಬಹುದು.

ಅಂತರರಾಷ್ಟ್ರೀಯ ಎನ್‌ಜಿಒಗಳು ಒಪ್ಪಂದಕ್ಕೆ ಸಾಕ್ಷಿಗಳಾಗಿ ಸಹಿ ಮಾಡುತ್ತವೆ. ಕಾರ್ಮಿಕರಿಗೆ ತರಬೇತಿ ನೀಡುವ ಮೂಲಕ ಮತ್ತು ಉದ್ಯೋಗದಾತರು ತಮ್ಮ ಜವಾಬ್ದಾರಿಗಳನ್ನು ಪೂರೈಸಲು ವಿಫಲವಾದಾಗ ಅದರ ಮೇಲ್ವಿಚಾರಣೆ ಮತ್ತು ದೂರುಗಳನ್ನು ಸಲ್ಲಿಸುವ ಮೂಲಕ ಒಕ್ಕೂಟಗಳು ಮತ್ತು ಕಾರ್ಮಿಕ ಹಕ್ಕುಗಳ ಎನ್‌ಜಿಒಗಳು ಕೂಡ ಸಕ್ರಿಯ ಪಾತ್ರವಹಿಸುತ್ತವೆ. ಕಾರ್ಮಿಕ ಹಕ್ಕುಗಳ ಸ್ಥಳೀಯ ಎನ್ಜಿಒಗಳು, ಸ್ಥಳೀಯ ಒಕ್ಕೂಟಗಳ ಆಹ್ವಾನದ ಮೇರೆಗೆ ಅಥವಾ ಆ ದೇಶದಲ್ಲಿ ಸಿದ್ಧಉಡುಪು ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಔಪಚಾರಿಕ ಒಕ್ಕೂಟಗಳಿಲ್ಲದಿದ್ದರೆ ಮಾತ್ರ ಇದರಲ್ಲಿ ಭಾಗಿಯಾಗಬಹುದು.


  1. ನ್ಯಾಯೋಚಿತ ಆಹಾರ ಕಾರ್ಯಕ್ರಮವು ಇಮೋಕಲೀ ಕಾರ್ಮಿಕರ ಒಕ್ಕೂಟ ಮತ್ತು ಯುಎಸ್ ಕೃಷಿ ಕ್ಷೇತ್ರದ ಹತ್ತು ಪ್ರಮುಖ ಟೊಮೆಟೊ ಖರೀದಿದಾರರ ನಡುವಿನ ಕಾನೂನುಬದ್ಧ ಒಪ್ಪಂದವಾಗಿದೆ. ಇದು ಕಾರ್ಮಿಕರಿಗೆ ಹೆಚ್ಚಿನ ವೇತನ ಮತ್ತು ಕಾರ್ಮಿಕರ ಹಕ್ಕುಗಳ ಕುರಿತು ತರಬೇತಿ ನೀಡುತ್ತದೆ. https://www.fairfoodprogram.org/
ಈ ಅಭಿಯಾನವು ಜೀವನಾವಶ್ಯಕ ವೇತನಕ್ಕಾಗಿ ಮಾತುಕತೆ ನಡೆಸುವ ಹಕ್ಕನ್ನು ಕಾರ್ಮಿಕರಿಂದ ಕಸಿದುಕೊಳ್ಳುತ್ತದೆಯೇ? 

ಇಲ್ಲ. ಒಪ್ಪಂದವು ವೇತನ ಮಟ್ಟವನ್ನು ನಿಗದಿಪಡಿಸುವುದಿಲ್ಲ; ಕಾರ್ಮಿಕರು ಹೆಚ್ಚಿನ ವೇತನದ ಬಗ್ಗೆ ಮಾತುಕತೆ ನಡೆಸಲು ಸ್ವತಂತ್ರರಾಗಿದ್ದಾರೆ. ಒಂದಾಗಿ ಸಂಘಟಿತರಾಗುವ ಮತ್ತು ಮಾತುಕತೆ ನಡೆಸುವ ಹಕ್ಕನ್ನು ರಕ್ಷಿಸಲು ಹಾಗು ಈ ಹಕ್ಕುಗಳನ್ನು ಚಲಾಯಿಸುವಾಗ ಕಾರ್ಮಿಕ ಮುಖಂಡರು ಮತ್ತು ಕಾರ್ಮಿಕರನ್ನು ಪ್ರತೀಕಾರದ ಕ್ರಮಗಳಿಂದ ರಕ್ಷಿಸುವ ನಿಬಂಧನೆಯನ್ನು ಸಹಾ ಈ ಒಪ್ಪಂದ ಹೊಂದಿರುತ್ತದೆ. ಮೇಲೆ ಗಮನಿಸಿದಂತೆ, ಸ್ಥಳೀಯ ಸಂಘಟನೆಗಳು ಮತ್ತು ಒಕ್ಕೂಟಗಳು, ಜಾಗತಿಕ ಇಡಬ್ಲ್ಯೂಎ ಕುರಿತು ಮಾತುಕತೆ ನಡೆಸಲು ಪ್ರತಿನಿಧಿಗಳನ್ನು ಆಯ್ಕೆಮಾಡುವಲ್ಲಿ ಸಹ ಭಾಗವಹಿಸುತ್ತವೆ.

ಜೀವನಾವಶ್ಯಕ ವೇತನ ಮಟ್ಟ (ಲಿವಿಂಗ್ ವೇಜ್ ಸ್ಟ್ಯಾಂಡರ್ಡ್)

ನಿರ್ದಿಷ್ಟವಾದ ಜೀವನಾವಶ್ಯಕ ವೇತನ ಮಾನದಂಡವನ್ನು ನಿರ್ಧರಿಸಲಾಗಿದೆಯೇ?

ಇಲ್ಲ. ಕಳೆದ ಒಂದು ದಶಕದಲ್ಲಿ, ಹಲವಾರು ಜೀವನಾವಶ್ಯಕ ವೇತನ ಮಾನದಂಡಗಳನ್ನು ವಿದ್ವಾಂಸರು ಮತ್ತು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ; ಅನೇಕ ದೇಶಗಳಲ್ಲಿನ ಒಕ್ಕೂಟಗಳು ಬಲವಾದ ಜೀವನಾವಶ್ಯಕ ವೇತನ ಬೇಡಿಕೆಗಳನ್ನು ಮತ್ತು ಪ್ರಾದೇಶಿಕ ಜೀವನಾವಶ್ಯಕ ವೇತನ ಸೂತ್ರೀಕರಣವನ್ನು ನಿಗದಿಪಡಿಸಿವೆ. ಏಷ್ಯಾ ಫ್ಲೋರ್ ವೇಜ್ ಅನ್ನು ಏಷ್ಯಾದ ಕಾರ್ಮಿಕ ಸಂಘಗಳು ಅಭಿವೃದ್ಧಿಪಡಿಸಿವೆ. ಈ ವಿಭಿನ್ನ ಉಪಕ್ರಮಗಳಿಂದ ಪಡೆಯಲಾದ ಜೀವನಾವಶ್ಯಕ ವೇತನದ ಅಂಕಿಅಂಶಗಳು ವಿಭಿನ್ನ ಮಾನದಂಡಗಳನ್ನು ಆಧರಿಸಿವೆ. ಬಡತನ ಮಟ್ಟದ ಆಹಾರ ಅವಶ್ಯಕತೆಯಿಂದ ಹಿಡಿದು ಒಂದು ಕುಟುಂಬದ ಗಣನೀಯ ಆಹಾರ ಅವಶ್ಯಕತೆಯವರೆಗೆ, ಮತ್ತು ಕೆಲಸ ಮಾಡುವ ಮಹಿಳೆಯರ ಅಗತ್ಯ ಗೃಹಕೃತ್ಯಗಳ ಕೆಲಸದ ವೆಚ್ಚದಲ್ಲಿನ ವ್ಯತ್ಯಾಸಗಳವರೆಗೂ ಈ ಮಾನದಂಡಗಳಿವೆ. ಈ ವಿಭಿನ್ನ ಉಪಕ್ರಮಗಳಲ್ಲಿ, ವಿಶ್ವಾಸಾರ್ಹವಾದ ಜೀವನಾವಶ್ಯಕ ವೇತನ ಅಂದಾಜುಗಳೆಲ್ಲಾ ಒಂದು ತೀರ್ಮಾನಕ್ಕೆ ಬಂದಿವೆ: ಜೀವನಾವಶ್ಯಕ ವೇತನ ಮತ್ತು ಕನಿಷ್ಠ ವೇತನದ ನಡುವಿನ ಅಂತರವು ಸರಾಸರಿ 3 ಅಂಶದ್ದಾಗಿದೆ. ಯಾವುದೇ ಒಂದು ನಿರ್ದಿಷ್ಟ ಮಾನದಂಡವನ್ನು ಆರಿಸುವ ಬದಲು, ಅಭಿಯಾನವು ವೇತನದ ಅಂತರವನ್ನು ಮುಚ್ಚುವತ್ತ ಗಮನ ಹರಿಸುತ್ತದೆ. ಸಹಿ ಹಾಕುವ ಕಂಪನಿಗಳು ಪ್ರಸ್ತುತ ತಮ್ಮ ಪೂರೈಕೆದಾರರಿಗೆ ಪಾವತಿಸುವ ಬೆಲೆಗಿಂತ 25% ಹೆಚ್ಚು ಪ್ರೀಮಿಯಂ ಅನ್ನು ನೀಡುವ ಅಗತ್ಯವಿರುತ್ತದೆ ಮತ್ತು ಅದು ನೇರವಾಗಿ ಕೆಲಸಗಾರರಿಗೆ ಹೋಗುತ್ತದೆ.

ಶಾಸನಬದ್ಧ ಕನಿಷ್ಠ ವೇತನವನ್ನು ಹೆಚ್ಚಿಸುವ ಹೋರಾಟಗಳಿಗೆ ಇದು ಹೇಗೆ ಸಂಬಂಧಿಸಿದೆ? 

The deal is directly linked to the ongoing fight for a higher minimum wage. Currently, brands are thriving in a highly competitive international market. Here various manufacturing countries are fighting for lower minimum wages to attract foreign investment. However, if the minimum wage is increased due to local struggles, brands may negotiate lower premiums under the agreement. 

ಜೀವನಾವಶ್ಯಕ ವೇತನ ಕೊಡುಗೆ

25% ಕೊಡುಗೆಯನ್ನು ಹೇಗೆ ಲೆಕ್ಕಹಾಕಲಾಗಿದೆ? 

ಈ ಕೊಡುಗೆಯನ್ನು ಎರಡು ಅಂಕಿಅಂಶಗಳ ಆಧಾರದ ಮೇಲೆ ಲೆಕ್ಕಹಾಕಲಾಗಿದೆ: 1) ಉತ್ಪಾದನಾ ದೇಶಗಳಲ್ಲಿ ಕನಿಷ್ಠ ವೇತನ ಮತ್ತು ಜೀವನಾವಶ್ಯಕ ವೇತನದ ನಡುವಿನ ಸರಾಸರಿ ಅಂತರ. ಹೆಚ್ಚಿನ ಉಡುಪು ಉತ್ಪಾದಿಸುವ ದೇಶಗಳಲ್ಲಿ ಈ ಅಂತರವು 3ರಿಂದ-5 ಪಟ್ಟು ಇದೆ ಎಂದು ದತ್ತಾಂಶಗಳು ಸೂಚಿಸುತ್ತವೆ. ನಮ್ಮ ಲೆಕ್ಕಾಚಾರಕ್ಕಾಗಿ ನಾವು ಈ ಶ್ರೇಣಿಯ ಕನಿಷ್ಟಾಂಕವನ್ನು ಬಳಸಿದ್ದೇವೆ ಮತ್ತು ಜೀವನಾವಶ್ಯಕ ವೇತನ ಮಟ್ಟವನ್ನು ತಲುಪಲು ಕನಿಷ್ಠ ವೇತನವನ್ನು ಮೂರರಿಂದ ಗುಣಿಸಬೇಕು ಎಂದು ಭಾವಿಸುತ್ತೇವೆ; ಮತ್ತು 2) ಉಡುಪಿನ ವೆಚ್ಚದಲ್ಲಿ ಕಾರ್ಮಿಕರತ್ತ ಹೋಗುವ ಭಾಗದ ಸರಾಸರಿ ಶೇಕಡಾವಾರು. ಉಡುಪಿನ ಉತ್ಪಾದನೆಯ ವೆಚ್ಚದ ಸರಿಸುಮಾರು 5-12% ಅದಕ್ಕೆ ವ್ಯಯವಾಗಿರುವ ಕಾರ್ಮಿಕರ ಶ್ರಮವನ್ನು ಪ್ರತಿನಿಧಿಸುತ್ತದೆ ಎಂದು ಸಂಶೋಧನೆ ತೋರಿಸುತ್ತದೆ. ನಮ್ಮ ಲೆಕ್ಕಾಚಾರಗಳಿಗೆ ಆಧಾರವಾಗಿ ಈ ಶ್ರೇಣಿಯ ಗರಿಷ್ಟಾಂಕ 12%ವನ್ನು ಬಳಸಲು ನಾವು ನಿರ್ಧರಿಸಿದ್ದೇವೆ.

3 x 12 ಅನ್ನು ಗುಣಿಸಿದಾಗ 36% ಸಿಗುತ್ತದೆ. ಇದು ಕಾರ್ಮಿಕರ ಕಡೆಗೆ ಹೋಗಬೇಕಾದ ಫ್ರೀಟ್-ಆನ್-ಬೋರ್ಡ್ (“FOB”) ಬೆಲೆಯ ಒಟ್ಟು ಮೊತ್ತವಾಗಿದೆ. ಎಫ್‌ಒಬಿ ಬೆಲೆಯ 12% ಈಗಾಗಲೇ ಕಾರ್ಮಿಕರತ್ತ ಸಾಗುತ್ತಿದೆ ಎಂದು ಊಹಿಸಿದರೆ, ಒಟ್ಟು ಕಾರ್ಮಿಕ ವೆಚ್ಚದ ಶೇಕಡಾವಾರು ಪ್ರಮಾಣ 36%ವನ್ನು ತಲುಪಲು ಎಫ್‌ಒಬಿ ಬೆಲೆಯು 24% ದಷ್ಟು ಹೆಚ್ಚಾಗಬೇಕಾಗುತ್ತದೆ. ಪ್ರಚಾರ ಉದ್ದೇಶಕ್ಕಾಗಿ 24% ವನ್ನು 25%ಕ್ಕೆ ಅಂತಿಮಗೊಳಿಸಲಾಗಿದೆ.

ಕಾರ್ಮಿಕರಿಗೆ ಜೀವನಾವಶ್ಯಕ ವೇತನ ಕೊಡುಗೆಯನ್ನು ಹೇಗೆ ವಿತರಿಸಲಾಗುವುದು? 

ನಿಯಮಿತ ವೇತನದ ಭಾಗವಾಗಿಯೇ ಈ ಕೊಡುಗೆಯನ್ನು ಕಾರ್ಮಿಕರಿಗೆ ವಿತರಿಸಲಾಗುವುದು ಮತ್ತು ಈ ಮೊತ್ತವು ಕಾರ್ಮಿಕರ ವೇತನ ಚೀಟಿಯಲ್ಲಿ ಪ್ರತ್ಯೇಕ ಸಾಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಅರೆಕಾಲಿಕ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರು ಕೆಲಸ ಮಾಡಿದ ಗಂಟೆಗಳನ್ನು ಆಧರಿಸಿ ಇದರಲ್ಲಿ ಪ್ರೋರೇಟೆಡ್ ಪಾಲನ್ನು ಪಡೆಯುತ್ತಾರೆ. ಕಾರ್ಮಿಕರು ಈಗಾಗಲೇ ಪಡೆಯುತ್ತಿರುವ ವೇತನ, ಸವಲತ್ತುಗಳು ಮತ್ತು ಇತರ ಪರಿಹಾರಗಳನ್ನು ಮೀರಿದ ಮತ್ತು ಹೆಚ್ಚುವರಿಯಾದ ಕೊಡುಗೆಯಾಗಿರುತ್ತದೆ. ಪೂರೈಕೆದಾರರು ವೇತನ, ಸವಲತ್ತುಗಳು ಮತ್ತು ಇತರ ಪರಿಹಾರಗಳನ್ನು ಕಡಿಮೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಮತ್ತು ಪರಿಹಾರ ಮತ್ತು ಸವಲತ್ತುಗಳನ್ನು ಕಡಿಮೆ ಮಾಡುವ ಸಲುವಾಗಿ ಕಾರ್ಮಿಕರನ್ನು ಮರು ವರ್ಗೀಕರಿಸಲು ಅನುಮತಿಸಲಾಗುವುದಿಲ್ಲ. ಆದಾಗ್ಯೂ, ಹೆಚ್ಚಿನ ಕಾರ್ಖಾನೆಗಳು ಏಕಕಾಲದಲ್ಲಿ ಹಲವು ಗ್ರಾಹಕರಿಗಾಗಿ ಉಡುಪು ಉತ್ಪಾದಿಸುತ್ತಿರುವುದರಿಂದ ಮತ್ತು ಎಲ್ಲಾ ಬ್ರ್ಯಾಂಡ್‌ಗಳು ಒಂದೇ ಸಮಯದಲ್ಲಿ ಈ ಒಪ್ಪಂದಕ್ಕೆ ಸಹಿ ಮಾಡುವುದಿಲ್ಲವಾದ್ದರಿಂದ, ಎಲ್ ಡಬ್ಲ್ಯೂ ಕೊಡುಗೆ ಎಂದಾಕ್ಷಣ ಭಾಗವಹಿಸುವ ಕಾರ್ಖಾನೆಗಳಲ್ಲಿನ ಕಾರ್ಮಿಕರು ತಕ್ಷಣವೇ ಜೀವನಾವಶ್ಯಕ ವೇತನವನ್ನು ಪಡೆಯುತ್ತಾರೆ ಎಂದಲ್ಲ.

ಕಾರ್ಮಿಕರು ಯಾವಾಗ ಜೀವನಾವಶ್ಯಕ ವೇತನವನ್ನು ಪಡೆಯುತ್ತಾರೆ? 

ಭಾಗವಹಿಸುವ ಕಾರ್ಖಾನೆಗಳಲ್ಲಿನ ಕಾರ್ಮಿಕರು, ಮೊದಲ ಬ್ರಾಂಡ್ ಒಪ್ಪಂದಕ್ಕೆ ಸಹಿ ಹಾಕಿದ ಕೂಡಲೇ ಜೀವನಾವಶ್ಯಕ ವೇತನವನ್ನು ಪಡೆಯುವುದಿಲ್ಲ. ಕಾರ್ಮಿಕರ ವೇತನ ಮಟ್ಟವು ಈ ಕಾರ್ಖಾನೆಯೊಂದಿಗೆ ವ್ಯವಹರಿಸುತ್ತಿರುವ ಬ್ರ್ಯಾಂಡ್‌ಗಳು ಇಡಬ್ಲ್ಯೂಎಗೆ ಸಹಿ ಹಾಕುವ ಶೇಕಡಾವಾರು ಪ್ರಮಾಣವನ್ನು ಅವಲಂಬಿಸಿರುತ್ತದೆ. ಕಾರ್ಖಾನೆಯೊಂದಿಗೆ ವ್ಯವಹರಿಸುತ್ತಿರುವ ಎಲ್ಲಾ ಬ್ರ್ಯಾಂಡ್‌ಗಳು ಈ ಒಪ್ಪಂದಕ್ಕೆ ಸಹಿ ಹಾಕಿದರೆ, ಪ್ರತಿ ಬ್ರಾಂಡ್‌ನ ಜೀವನಾವಶ್ಯಕ ವೇತನದ ಕೊಡುಗೆಯು, ಜೀವನಾವಶ್ಯಕ ವೇತನಕ್ಕೆ ಸೇರಿಕೊಂಡು ಅದು ಹೆಚ್ಚಾಗುತ್ತದೆ.

ಅನುಷ್ಠಾನ

ಸಹಿ ಹಾಕುವ ಬ್ರ್ಯಾಂಡ್‌ಗಳು ಮತ್ತು ರೀಟೇಲ್ ವ್ಯಾಪಾರಿಗಳಿಗಿರುವ ಹೊಣೆಗಾರಿಕೆಗಳು ಯಾವುವು? 

ಸಹಿ ಮಾಡುವ ಬ್ರ್ಯಾಂಡ್‌ಗಳು ಅಥವಾ ರೀಟೇಲ್ ವ್ಯಾಪಾರಿಗಳು ಈ ಕೆಳಗಿವುಗಳಿಗೆ ಬದ್ಧವಾಗಿರುತ್ತಾರೆ:

  • ಬ್ರ್ಯಾಂಡ್ ಗಳು ಯಾವ ಕಾರ್ಖಾನೆಗಳಿಂದ ಸಿದ್ಧಉಡುಪನ್ನು ಪಡೆಯುತ್ತವೋ, ಆ ಕಾರ್ಖಾನೆಗಳಿಗೆ ತಾವು ಆ ಉಡುಪಿಗಾಗಿ ಪಾವತಿಸಿದ ಎಫ್‌ಒಬಿ ಬೆಲೆಯ 25%ಕ್ಕೆ ಸಮಾನವಾದ ಪ್ರೀಮಿಯಂ ಅನ್ನು ನೀಡಬೇಕು. ಜೀವನಾವಶ್ಯಕ ವೇತನ ಕೊಡುಗೆ (“ಕೊಡುಗೆ”) ಎಂದು ಕರೆಯಲ್ಪಡುವ ಈ ಪ್ರೀಮಿಯಂ, ಕಾರ್ಖಾನೆಗೆ ಬ್ರಾಂಡ್ ಪಾವತಿಸುವ ಆರ್ಡರ್ ಬೆಲೆಯೊಳಗೆ ಸೇರಿರುವುದಿಲ್ಲ ಮತ್ತು ಇದು ಹೆಚ್ಚುವರಿ ಪಾವತಿಯಾಗಿರುತ್ತದೆ. ಕಾರ್ಮಿಕರಿಗೆ ಈ ಮೊತ್ತ ತಲುಪುವಂತೆ ಸಹಿ ಮಾಡಿರುವವರು ಮೇಲ್ವಿಚಾರಣೆ ಮಾಡುತ್ತಾರೆ. ಅವರು ಈ ನಿರ್ದಿಷ್ಟ ಉದ್ದೇಶಕ್ಕಾಗಿಯೇ ಸ್ವತಂತ್ರ ತೃತೀಯ ಸಂಘಟನೆಯನ್ನು ಸ್ಥಾಪಿಸಬಹುದು. ಈ ಸಂಸ್ಥೆಗಳಿಗೆ ಬ್ರಾಂಡ್‌ಗಳು ನಿರ್ದಿಷ್ಟ ಶುಲ್ಕವನ್ನು ಪಾವತಿಸುವುದು ಅಗತ್ಯ. ಈ ಹಣವನ್ನು ಒಪ್ಪಂದದ ಪ್ರಕಾರ ಅದರ ಚಟುವಟಿಕೆಗಳನ್ನು ನಿರ್ವಹಿಸಲು ಸಂಸ್ಥೆಗಳು ಬಳಸುತ್ತವೆ;
  • ಯಾವುದೇ ದೇಶದಲ್ಲಿನ ಕಾರ್ಖಾನೆಗಳಿಗೆ ನೀಡುವ ಉಡುಪಿನ ಆರ್ಡರ್ ನ ಒಟ್ಟಾರೆ ಸರಾಸರಿ ಎಫ್‌ಒಬಿ ಬೆಲೆಯನ್ನು ಇದು ಕಡಿಮೆ ಮಾಡದಂತೆ ನೋಡಿಕೊಳ್ಳುವುದು;
  • ಎಲ್ಲಾ ಕಾರ್ಮಿಕರಿಗೆ ಜೀವನಾವಶ್ಯಕ ವೇತನ ಕೊಡುಗೆಯನ್ನು ವಿತರಿಸುವುದು ಮತ್ತು ಸಂಘಟನೆಯ ಸ್ವಾತಂತ್ರ್ಯವನ್ನು ಗೌರವಿಸುವುದು ಸೇರಿದಂತೆ ಮೇಲೆ ವಿವರಿಸಿರುವ ಎಲ್ಲಾ ಸರಬರಾಜುದಾರರ ಹೊಣೆಗಾರಿಕೆಯನ್ನು ಅನುಸರಿಸುವಂತೆ ತಮ್ಮ ಪ್ರತಿಯೊಂದು ಪೂರೈಕೆದಾರ ಕಾರ್ಖಾನೆಗಳಿಗೆ ನಿರ್ದೇಶಿಸುವುದು.
ಪೂರೈಕೆದಾರರ ಹೊಣೆಗಾರಿಕೆಗಳೇನು?

ಈ ಒಪ್ಪಂದದ ಪ್ರಕಾರ, ಪೂರೈಕೆದಾರರು ಈ ಕೆಳಗಿನವುಗಳಿಗೆ ಬದ್ಧರಾಗಿರುತ್ತಾರೆ:

  • ಬ್ರಾಂಡ್‌ ಗಳು ಸರಬರಾಜುದಾರರಿಗೆ ಕೊಡುಗೆಯನ್ನು ಪಾವತಿಸಿದ ಕೂಡಲೇ ಅದನ್ನು ವೇತನದ ಒಂದು ಭಾಗವಾಗಿ, ಜೀವನಾವಶ್ಯಕ ವೇತನ ಕೊಡುಗೆಯಾಗಿ ಉದ್ಯೋಗಿಗಳಿಗೆ ವಿತರಿಸುವುದು. ಕಾರ್ಖಾನೆಯಲ್ಲಿ ಯೂನಿಯನ್ ಸಕ್ರಿಯವಾಗಿದ್ದಲ್ಲಿ, ಉದ್ಯೋಗದಾತರು ಕಾರ್ಮಿಕರಿಗೆ ಕೊಡುಗೆಯನ್ನು ಹೇಗೆ ಹಂಚುವುದು ಎಂಬುದರ ಕುರಿತು ಯೂನಿಯನ್ ಜೊತೆ ಪ್ರತ್ಯೇಕ ಒಪ್ಪಂದವನ್ನು ಮಾಡಿಕೊಳ್ಳಬೇಕು. ಕಾರ್ಖಾನೆಯಲ್ಲಿ ಯಾವುದೇ ಯೂನಿಯನ್ ಸಕ್ರಿಯವಾಗಿಲ್ಲದಿದ್ದಲ್ಲಿ, ಎಲ್ಲಾ ಅರ್ಹ ಕಾರ್ಮಿಕರಿಗೆ ಕೊಡುಗೆಯನ್ನು ಸಮನಾಗಿ ವಿತರಿಸಬೇಕು. ಅರ್ಹ ಕಾರ್ಮಿಕರೆಂದರೆ ಉತ್ಪಾದನಾ ಫ್ಲೋರ್ ನ ಕೆಲಸಗಾರರು, ಗುಣಮಟ್ಟ ನಿಯಂತ್ರಣ, ಪ್ಯಾಕಿಂಗ್, ನಿರ್ವಹಣೆ, ಲೈನ್ ಲೀಡರ್‌ಗಳು ಮತ್ತು ಆರ್ಡರ್ ಪೂರ್ಣಗೊಂಡ ತಿಂಗಳಲ್ಲಿ ಕಾರ್ಖಾನೆ ನಿಯಮಿಸಿಕೊಂಡಿದ್ದ ಮೇಲ್ವಿಚಾರಕರು ಸೇರಿದ್ದಾರೆ. ಪ್ರೀಮಿಯಂ ಸ್ವೀಕರಿಸಲು ವ್ಯವಸ್ಥಾಪಕರು ಅರ್ಹರಾಗಿರುವುದಿಲ್ಲ. ಅರೆಕಾಲಿಕ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರು ಪೂರ್ಣಾವಧಿ ಕೆಲಸ ಮಾಡಿದ ಸಮಯವನ್ನು ಆಧರಿಸಿ ಪ್ರಮಾಣೀಕರಿಸಿದ ಮೊತ್ತವನ್ನು ಸ್ವೀಕರಿಸುತ್ತಾರೆ.

ಮೇಲ್ವಿಚಾರಣೆ ಮತ್ತು ಜಾರಿ

ಹೆಚ್ಚಿನ ಮಾಹಿತಿ
  • ಸಹಿ ಮಾಡಿರುವವರು ಈ ಉದ್ದೇಶಕ್ಕಾಗಿಯೇ ನಿರ್ದಿಷ್ಟವಾಗಿ ಸ್ಥಾಪಿಸಲಾದ ಸ್ವತಂತ್ರ ತೃತೀಯ ಸಂಘಟನೆಯ ಮೂಲಕ ಒಪ್ಪಂದದ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಉಲ್ಲಂಘನೆಗಳನ್ನು ವರದಿ ಮಾಡಲು ಕಾರ್ಮಿಕರಿಗೆ 24 ಗಂಟೆಗಳೂ ಕೆಲಸ ಮಾಡುವ ದೂರು ಕಾರ್ಯವಿಧಾನ ಲಭ್ಯವಿರಬೇಕು. ಸ್ವತಂತ್ರ ತೃತೀಯ ಸಂಸ್ಥೆಯು ನಡೆಸುವ ದೂರುಗಳ ತನಿಖೆ ಮತ್ತು ದೂರುಗಳ ತನಿಖೆಗೆ ಸಂಬಂಧಿಸಿದ ಶೋಧನೆಗಳು ಮತ್ತು ನಿರ್ಧಾರಗಳೊಂದಿಗೆ ಸಂಪೂರ್ಣವಾಗಿ ಸಹಕರಿಸಲು ಸರಬರಾಜುದಾರರು ಬಾಧ್ಯರಾಗಿರುತ್ತಾರೆ. ಮತ್ತು ಮೇಲ್ವಿಚಾರಣ ಸಮಿತಿ ಆದೇಶಿಸಿದ ತಿದ್ದುಪಡಿ ಕ್ರಿಯಾ ಯೋಜನೆ ಮತ್ತು ಇತರ ಪರಿಹಾರಗಳನ್ನು ಕಾರ್ಯಗತಗೊಳಿಸಬೇಕು.
  • ಕಾರ್ಮಿಕರಿಗೆ ನೀಡಲಾಗುವ ವೇತನ, ಸವಲತ್ತುಗಳು ಅಥವಾ ಇತರ ಪರಿಹಾರಗಳನ್ನು ಕಡಿಮೆ ಮಾಡಬಾರದು.
  • ಕಾರ್ಮಿಕರ ಕೊಡುಗೆಯ ಪಾವತಿ, ಸಂಘಟನಾ ಸ್ವಾತಂತ್ರ್ಯದ ಹಕ್ಕು ಮತ್ತು ಕಾರ್ಯಕ್ರಮದ ಅಡಿಯಲ್ಲಿ ತಮ್ಮ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅವರು ಭಾವಿಸಿದರೆ ದೂರು ಸಲ್ಲಿಸುವ ಹಕ್ಕನ್ನು ಒಳಗೊಂಡಂತೆ ಕಾರ್ಯಕ್ರಮದ ಅಡಿಯಲ್ಲಿ ತಮಗಿರುವ ಹಕ್ಕುಗಳ ಬಗ್ಗೆ ಕಾರ್ಮಿಕರಿಗೆ ತರಬೇತಿ ನೀಡುವುದು. ಈ ತರಬೇತಿಗಳನ್ನು ಯೂನಿಯನ್‌ಗಳು ಮತ್ತು / ಅಥವಾ ಎನ್‌ಜಿಒಗಳು ನಡೆಸುತ್ತವೆ ಮತ್ತು ಕಾರ್ಮಿಕರು ತರಬೇತಿಗಾಗಿ ವ್ಯಯಿಸಿದ ಸಮಯಕ್ಕೂ ಸರಬರಾಜುದಾರರು ಸಂಬಳ ಪಾವತಿಸಬೇಕು. ಕಾರ್ಖಾನೆಯಲ್ಲಿ ಕಾರ್ಮಿಕ ಒಕ್ಕೂಟವಿದ್ದಲ್ಲಿ, ತರಬೇತಿ ನೀಡುವ ಸಂಸ್ಥೆ ಅಥವಾ ಸಂಸ್ಥೆಗಳನ್ನು ಉದ್ಯೋಗದಾತರು ಮತ್ತು ಒಕ್ಕೂಟ ಇಬ್ಬರೂ ಅಂಗೀಕರಿಸಬೇಕು
  • ದೂರು ಕಾರ್ಯವಿಧಾನವನ್ನು ಬಳಸುವ ಅಥವಾ ಬಳಸಲು ಪ್ರಯತ್ನಿಸುವ ಅಥವಾ ಸಾಕ್ಷ್ಯವನ್ನು ಒದಗಿಸುವ ಯಾವುದೇ ಕಾರ್ಮಿಕರ ವಿರುದ್ಧ ಯಾವುದೇ ರೀತಿಯಲ್ಲಿ ಪ್ರತೀಕಾರ ಕ್ರಮಗಳು ಜರುಗಿಸಬಾರದು.
ಪೂರೈಕೆದಾರರ ಹೊಣೆಗಾರಿಕೆಗಳನ್ನು ಹೇಗೆ ಜಾರಿಗೊಳಿಸಲಾಗುತ್ತದೆ?

ಮಾರುಕಟ್ಟೆ ಆಧಾರಿತ ಜಾರಿ ಕಾರ್ಯವಿಧಾನದ ಮೂಲಕ ಪೂರೈಕೆದಾರರ ಹೊಣೆಗಾರಿಕೆಗಳನ್ನು ಜಾರಿಗೊಳಿಸಲಾಗುತ್ತದೆ. ತನಿಖೆಯೊಂದಿಗೆ ಸಹಕರಿಸಲು, ತನಿಖೆಯಿಂದ ಉದ್ಭವಿಸುವ ಅಗತ್ಯ ತಿದ್ದುಪಡಿ ಕ್ರಮಗಳನ್ನು ಜಾರಿಗೊಳಿಸುವಲ್ಲಿ ಅಥವಾ ಕಾರ್ಯಕ್ರಮದ ಅಡಿಯಲ್ಲಿ ತನ್ನ ಜವಾಬ್ದಾರಿಗಳನ್ನು ಪೂರೈಸುವಲ್ಲಿ ಸರಬರಾಜುದಾರರು ವಿಫಲರಾದರೆ, ಸರಬರಾಜುದಾರರೊಂದಿಗೆ ಮತ್ತು ಅದೇ ಮಾಲೀಕರ ಒಡೆತನದ ಮತ್ತು ಅದೇ ಮಾಲಿಕರು ನಿರ್ವಹಿಸುತ್ತಿರುವ ಇತರ ಸೌಲಭ್ಯಗಳೊಂದಿಗೆ ಎಲ್ಲಾ ರೀತಿಯ ವ್ಯಾಪಾರ ವ್ಯವಹಾರ ಸಂಬಂಧಗಳನ್ನು ಕೊನೆಗೊಳಿಸುವುದು ಸಹಿ ಮಾಡಿರುವ ಬ್ರಾಂಡ್‌ಗಳ ಹೊಣೆಯಾಗಿರುತ್ತದೆ. ಕಾರ್ಖಾನೆಯಲ್ಲಿ ಅಗತ್ಯವಾದ ಹೊಸ ತಿದ್ದುಪಡಿ ಕ್ರಮವನ್ನು ಕಾರ್ಖಾನೆ ಜಾರಿಗೆ ತಂದಿದೆ ಎಂದು ನಿರ್ಧಾರವಾಗದ ಹೊರತು ಅಥವಾ ನಿರ್ಧಾರವಾಗುವ ತನಕ ಆ ಕಾರ್ಖಾನೆ ಅಥವಾ ಅದೇ ಮಾಲೀಕರ ಒಡೆತನದ ಮತ್ತು ಅದೇ ಮಾಲಿಕರು ನಿರ್ವಹಿಸುವ ಯಾವುದೇ ಸೌಲಭ್ಯಗಳಿಗೆ ಯಾವುದೇ ಹೊಸ ಆರ್ಡರ್ ಗಳನ್ನು ಸಹಿ ಹಾಕಿರುವ ಬ್ರ್ಯಾಂಡ್‌ಗಳು ನೀಡಬೇಕಾಗಿಲ್ಲ.

ಸಹಿ ಹಾಕಿದ ಬ್ರ್ಯಾಂಡ್‌ಗಳ ಮತ್ತು ರೀಟೇಲ್ ವ್ಯಾಪಾರಿಗಳ ಹೊಣೆಗಾರಿಕೆಯನ್ನು ಹೇಗೆ ಜಾರಿಗೊಳಿಸಲಾಗುತ್ತದೆ? 

ಸಹಿ ಹಾಕಿದ ಬ್ರ್ಯಾಂಡ್‌ಗಳು ಮತ್ತು ರೀಟೇಲ್ ವ್ಯಾಪಾರಿಗಳ ಹೊಣೆಗಾರಿಕೆಯನ್ನು ಕಾನೂನುಬದ್ಧವಾದ ಮಧ್ಯಸ್ಥಿಕೆಯ ಮೂಲಕ ಜಾರಿಗೊಳಿಸಲಾಗುತ್ತದೆ. ಒಪ್ಪಂದಕ್ಕೆ ಸಹಿ ಮಾಡಿದವರಿಗೆ ಯಾವುದೇ ಬ್ರಾಂಡ್ ಅಥವಾ ರೀಟೇಲ್ ವ್ಯಾಪಾರಿ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎನಿಸಿದರೆ, ಆ ಸಹಿದಾರರು ಮಧ್ಯಸ್ಥಿಕೆಗಾಗಿ ಕೋರಬಹುದು. ಮಧ್ಯಸ್ಥಿಕೆದಾರರ ನಿರ್ಧಾರವು ಏನೇ ಆಗಿದ್ದರೂ ಸಹಿ ಮಾಡಿರುವ ಬ್ರಾಂಡ್‌ಗಳು ಮತ್ತು ಪೂರೈಕೆದಾರ ಮೇಲೆ ಅದನ್ನು ನ್ಯಾಯಾಲಯದಲ್ಲಿ ಜಾರಿಗೊಳಿಸಬಹುದು

ಒಪ್ಪಂದದ ಅನುಷ್ಠಾನವನ್ನು ಹೇಗೆ ಮೇಲ್ವಿಚಾರಣೆ ಮಾಡಲಾಗುತ್ತದೆ? 

ಒಪ್ಪಂದದ ಅನುಸರಣೆಯ ಮೇಲ್ವಿಚಾರಣೆ ಮಾಡುವ ನಿರ್ದಿಷ್ಟ ಉದ್ದೇಶದಿಂದಲೇ ಸಹಿದಾರರು ರಚಿಸಿದ ಸ್ವತಂತ್ರ, ತೃತೀಯ ಸಂಸ್ಥೆಯಿಂದ ಒಪ್ಪಂದದ ಅನುಷ್ಠಾನದ ಮೇಲ್ವಿಚಾರಣೆ ಮಾಡಲಾಗುತ್ತದೆ. ಸಹಿ ಹಾಕಿದ ಬ್ರ್ಯಾಂಡ್ (ಗಳು) ಕಾರ್ಖಾನೆಗಳಿಗೆ ಮತ್ತು ಕಾರ್ಖಾನೆಗಳು ಕಾರ್ಮಿಕರಿಗೆ ಜೀವನಾವಶ್ಯಕ ವೇತನ ಕೊಡುಗೆಯನ್ನು ಪಾವತಿಸಿವೆ ಎಂದು ಪರಿಶೀಲಿಸುವುದು; ದೂರು ಕಾರ್ಯವಿಧಾನವನ್ನು ನಿರ್ವಹಿಸುವುದು; ಉಲ್ಲಂಘನೆ ದೂರುಗಳ ತನಿಖೆ; ಶೋಧನೆ ಮತ್ತು ಉಲ್ಲಂಘನೆಗಳ ವಿರುದ್ಧ ಅಗತ್ಯ ತಿದ್ದಪಡಿ ಕ್ರಮ ಜಾರಿ; ಕಾರ್ಯಕ್ರಮವನ್ನು ನಿರ್ವಹಿಸುವುದು; ಮತ್ತು ಅನುಷ್ಠಾನದ ಬಗ್ಗೆ ಸಾರ್ವಜನಿಕವಾಗಿ ವರದಿ ಮಾಡುವುದು ಮುಂತಾದ ಜವಾಬ್ದಾರಿ ಈ ಸಂಸ್ಥೆಯದ್ದಾಗಿದೆ. ಸಹಿ ಹಾಕಿರುವ ಬ್ರ್ಯಾಂಡ್ (ಗಳ) ಪೂರೈಕೆದಾರರು ಇರುವ ಯಾವುದೇ ದೇಶದಲ್ಲಿ ತನಿಖೆ ನಡೆಸುವ ಮತ್ತು ದೂರುಗಳಿಗೆ ಪ್ರತಿಕ್ರಿಯಿಸುವ ಅಧಿಕಾರವನ್ನು ಸಂಸ್ಥೆ ಹೊಂದಿರುತ್ತದೆ.

ಕಾರ್ಯಕ್ರಮದ ಅಡಿಯಲ್ಲಿ ತಮ್ಮ ಹಕ್ಕುಗಳ ಉಲ್ಲಂಘನೆಯಾದರೆ ಕಾರ್ಮಿಕರು ಹೇಗೆ ದೂರು ಸಲ್ಲಿಸಬಹುದು?

ಸಂಘಟನೆಯು 24 ಗಂಟೆಗಳೂ ಕೆಲಸ ಮಾಡುವ ದೂರು ಕಾರ್ಯವಿಧಾನವನ್ನು ನಿರ್ವಹಿಸುತ್ತದೆ. ಅದರ ಮೂಲಕ ಕಾರ್ಮಿಕರು ದೂರುಗಳನ್ನು ಮತ್ತು/ಅಥವಾ ಒಪ್ಪಂದದ ಉಲ್ಲಂಘನೆಯ ವರದಿಗಳನ್ನು ಸಲ್ಲಿಸಬಹುದು. ಎಲ್ಲಾ ವಿಶ್ವಾಸಾರ್ಹ ದೂರುಗಳ ಬಗ್ಗೆ ಮೇಲ್ವಿಚಾರಣಾ ಸಮಿತಿ ತನಿಖೆ ನಡೆಸುತ್ತದೆ. ಕಾರ್ಯಕ್ರಮದ ಬಗ್ಗೆ ಕಾರ್ಮಿಕರು ಪಡೆಯುವ ತರಬೇತಿಯಲ್ಲಿ ದೂರು ಕಾರ್ಯವಿಧಾನವನ್ನು ಹೇಗೆ ಬಳಸುವುದು ಎಂಬ ಮಾಹಿತಿ ಇರುತ್ತದೆ. ದೂರು ಕಾರ್ಯವಿಧಾನವನ್ನು ಬಳಸುವ ಅಥವಾ ತನಿಖೆಯಲ್ಲಿ ಭಾಗವಹಿಸುವ ಯಾವುದೇ ಕಾರ್ಮಿಕರ ವಿರುದ್ಧ ಪ್ರತೀಕಾರ ಕ್ರವವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಕಾರ್ಯಕ್ರಮದ ಬಗ್ಗೆ ಕಾರ್ಮಿಕರಿಗೆ ಹೇಗೆ ತಿಳಿಯುತ್ತದೆ?

ಒಪ್ಪಂದಕ್ಕೆ ಸಹಿ ಹಾಕಿದ ಸಂಘಗಳು ಮತ್ತು ಎನ್‌ಜಿಒಗಳಿಂದ ಕಾರ್ಮಿಕರಿಗೆ ಕಾರ್ಯಕ್ರಮದ ಬಗ್ಗೆ ತರಬೇತಿ ನೀಡಲಾಗುತ್ತದೆ. ಕೊಡುಗೆ ಮತ್ತು ಅದು ಕಾರ್ಮಿಕರಿಗೆ ಹೇಗೆ ತಲುಪುತ್ತದೆ, ಕಾರ್ಯಕ್ರಮದ ಯಶಸ್ಸಿಗೆ ಸಂಘಟನಾ ಸ್ವಾತಂತ್ರ್ಯ ಎಷ್ಟು ಅಗತ್ಯ, ಸಹಿ ಮಾಡಿದ ಸಂಘಗಳು ಮತ್ತು ಎನ್‌ಜಿಒಗಳ ಪಾತ್ರ ಮತ್ತು ದೂರು ಕಾರ್ಯವಿಧಾನವನ್ನು ಹೇಗೆ ಬಳಸುವುದು ಎಂಬುದರ ಕುರಿತು ತರಬೇತಿಯಲ್ಲಿ ಮಾಹಿತಿಯನ್ನು ಒದಗಿಸಲಾಗುತ್ತದೆ. ಸಾಮಾನ್ಯ ಕೆಲಸದ ಅವಧಿಯಲ್ಲಿ, ಕಾರ್ಖಾನೆ ಆವರಣದಲ್ಲಿ ತರಬೇತಿಗಳು ನಡೆಯುತ್ತವೆ ಮತ್ತು ಸರಬರಾಜುದಾರರು ತರಬೇತಿಗೆ ಬಳಕೆಯಾದ ಈ ಸಮಯಕ್ಕೂ ಕಾರ್ಮಿಕರಿಗೆ ಸಂಬಳ ನೀಡುತ್ತಾರೆ.

ಈ ಕಾರ್ಯಕ್ರಮಕ್ಕೆ ಹಣ ಎಲ್ಲಿಂದ ಬರುತ್ತದೆ?

ಪ್ರತಿ ಸಹಿದಾರ ಬ್ರ್ಯಾಂಡ್ ಮತ್ತು ರೀಟೇಲ್ ವ್ಯಾಪಾರಿಗಳು ವಾರ್ಷಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದನ್ನು ಕಾರ್ಯಕ್ರಮದ ಸ್ಥಾಪನೆ ಮತ್ತು ಕಾರ್ಯಾಚರಣೆಗೆ ಬಳಸಲಾಗುತ್ತದೆ. ಇದರಲ್ಲಿ ದೂರುಗಳ ತನಿಖೆ, ದೂರು ಕಾರ್ಯವಿಧಾನವನ್ನು ನಿರ್ವಹಿಸುವುದು, ಕಾರ್ಯಕ್ರಮದ ಬಗ್ಗೆ ಕಾರ್ಮಿಕರಿಗೆ ತರಬೇತಿ ನೀಡುವ ಒಕ್ಕೂಟಗಳು ಮತ್ತು ಎನ್‌ಜಿಒಗಳನ್ನು ಬೆಂಬಲಿಸುವುದು, ಕಾರ್ಯಕ್ರಮದ ಚಟುವಟಿಕೆಗಳ ಬಗ್ಗೆ ವರದಿಗಳನ್ನು ಪ್ರಕಟಿಸುವುದು ಮತ್ತು ಇತರ ಕಾರ್ಯಾಚರಣೆಯ ವೆಚ್ಚಗಳು ಒಳಗೊಂಡಿವೆ. ಆದರೆ ಇಷ್ಟಕ್ಕೆ ಸೀಮಿತವಾಗಿರುವುದಿಲ್ಲ.

ನಿರ್ದಿಷ್ಟ ದೇಶದಲ್ಲಿ ಕಾನೂನುಬದ್ಧ ಕನಿಷ್ಠ ವೇತನ ಹೆಚ್ಚಾಗಿ, ಕನಿಷ್ಠ ವೇತನ ಮತ್ತು ಜೀವನಾವಶ್ಯಕ ವೇತನದ ನಡುವಿನ ಅಂತರವು ಕಡಿಮೆಯಾದರೆ ಏನಾಗುತ್ತದೆ?

ಈ ವಲಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಕನಿಷ್ಠ ವೇತನದಲ್ಲಿ ಯಾವುದೇ ಹೆಚ್ಚಳವಾದರೆ ಈ ದೇಶದಲ್ಲಿ ಉತ್ಪಾದನೆ ಮುಂದುವರಿಸಲು ಅಥವಾ ಹೆಚ್ಚಿಸಲು ಬ್ರ್ಯಾಂಡ್‌ಗಳಿಗೆ ಮತ್ತು ರೀಟೇಲ್ ವ್ಯಾಪಾರಿಗಳಿಗೆ ಇದು ಪ್ರೋತ್ಸಾಹದಾಯಕವಾಗಿ ಪರಿಣಮಿಸುತ್ತದೆ. ಏಕೆಂದರೆ ಅವರು ಜೀವನಾವಶ್ಯಕ ವೇತನವನ್ನು ಸಾಧಿಸಲು ನೀಡಬೇಕಾದ ಪ್ರೀಮಿಯಂ ಕಡಿಮೆಯಾಗುತ್ತದೆ. ಪ್ರಸ್ತುತ ಪಾವತಿಸುತ್ತಿರುವ ಎಫ್‌ಒಬಿ ಬೆಲೆಯ 25% ವನ್ನು ಬ್ರ್ಯಾಂಡ್ ಗಳು ಈಗ ಪ್ರೀಮಿಯಂ ಆಗಿ ಪಾವತಿಸಬೇಕಾಗಿದೆ. ಜೀವನಾವಶ್ಯಕ ವೇತನ ಮತ್ತು ಶಾಸನಬದ್ಧ ಕನಿಷ್ಟ ವೇತನ ನಡುವಿನ ಅಂತರವು 200% ಕ್ಕಿಂತ ಕಡಿಮೆಯಾಗಿದ್ದರೆ ಅಥವಾ ಜೀವನಾವಶ್ಯಕ ವೇತನ ಮಟ್ಟದಲ್ಲಿ ಕಾರ್ಮಿಕ ವೆಚ್ಚವನ್ನು ಸರಿದೂಗಿಸಲು ಸಾಕಷ್ಟು ಹೆಚ್ಚು ಎಫ್‌ಒಬಿ ಬೆಲೆಗಳನ್ನು ಪಾವತಿಸುತ್ತಿದ್ದೇವೆ ಎಂದು ಬ್ರ್ಯಾಂಡ್ ಗಳು ಸಾಬೀತುಪಡಿಸಿದರೆ ಮತ್ತು ಇದು ನಿಜವಾಗಿ ಕಾರ್ಮಿಕರ ಹೆಚ್ಚಿನ ವೇತನಕ್ಕೆ ಕಾರಣವಾಗುತ್ತಿದೆ ಎಂದು ತೋರಿಸಿದರೆ ಈ 25% ದರ ಬದಲಾಗವುದು ಸಾಧ್ಯ. ಸ್ಥಳೀಯ ಕಾರ್ಮಿಕ ಸಂಘಟನೆಯ ಸಹಿದಾರರು ಈ ಸಾಮಾನ್ಯ ದರವಾದ 25% ವನ್ನು ಬದಲಾಯಿಸಲು ಒಪ್ಪಿಕೊಂಡರೆ ಮಾತ್ರ ಕಡಿಮೆ ಮೊತ್ತವನ್ನು ಪಾವತಿಸಬಹುದು.

ಈ ಒಪ್ಪಂದವು ಬಟ್ಟೆಯ ಬೆಲೆಯನ್ನು ಹೆಚ್ಚಿಸಲಿದೆಯೇ?

ಸಹಿ ಹಾಕುವ ಬ್ರ್ಯಾಂಡ್‌ಗಳು ತಮ್ಮ ಸರಬರಾಜುದಾರರಿಗೆ ಹೆಚ್ಚಿನ ಬೆಲೆ ಪಾವತಿಸಬೇಕಾಗುತ್ತದೆ. ಆದರೆ ಅವರು ಈ ವೆಚ್ಚವನ್ನು ಗ್ರಾಹಕರಿಗೆ ದಾಟಿಸಬೇಕಾಗಿಲ್ಲ. ಬಟ್ಟೆಗಳ ಬೆಲೆಗಳನ್ನು ಹೆಚ್ಚಿಸುವ ಬದಲು, ಹೋಲಿಕೆಯಲ್ಲಿ ಸಣ್ಣ ಮೊತ್ತವಾಗಿರುವ ಈ ಹೆಚ್ಚಳವನ್ನು ತಾವೇ ಭರಿಸಲು ಬ್ರಾಂಡ್‌ಗಳು ನಿರ್ಧರಿಸಬಹುದು. ಬ್ರ್ಯಾಂಡ್‌ಗಳು ಬೆಲೆಗಳನ್ನು ಹೆಚ್ಚಿಸಲು ನಿರ್ಧರಿಸಿದರೂ, ಈ ಹೆಚ್ಚಳಗಳು ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಏಕೆಂದರೆ ಕಾರ್ಮಿಕ ವೆಚ್ಚವು ಉಡುಪಿನ ಒಟ್ಟು ವೆಚ್ಚದಲ್ಲಿ ಒಂದು ಸಣ್ಣ ಭಾಗವಾಗಿದೆ.

ಈ ಒಪ್ಪಂದವು ದೀರ್ಘಕಾಲೀನ ಪುನರ್ವಿತರಣೆ ಪರಿಣಾಮಗಳನ್ನು ಹೊಂದಿರುತ್ತದೆ ಮತ್ತು ಇತರ ಅಂಶಗಳ ಜೊತೆ ಸೇರಿ ಸಿದ್ಧಉಡುಪು ಉದ್ಯಮದ ಮೇಲೆ ಊಹಿಸಲು ಕಷ್ಚವಾದ ಪುನರ್ರಚನೆಯ ಪರಿಣಾಮ ಬೀರುತ್ತದೆ ಎಂಬುದು ಖಂಡಿತಾ ನಿಜ. ಉತ್ಪಾದಕ ಮತ್ತು ಗ್ರಾಹಕ ರಾಷ್ಟ್ರಗಳಿಗೆ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಪರಿಸರದ ದೃಷ್ಟಿಯಲ್ಲಿ ಇದು ಸಕಾರಾತ್ಮಕ ಬದಲಾವಣೆಯಾಗಿರುವಂತೆ ಮಾಡಲು ನಮ್ಮ ನೆಟ್‌ವರ್ಕ್ ಕಾರ್ಯನಿರ್ವಹಿಸಲಿದೆ. ಪೂರೈಕೆ ಸರಪಳಿಯಲ್ಲಿ ಸಂಪತ್ತು ಮತ್ತು ಅಧಿಕಾರವನ್ನು ನ್ಯಾಯಯುತವಾಗಿ ಪುನರ್ವಿತರಣೆ ಮಾಡುವ ನಮ್ಮ ಧ್ಯೇಯವನ್ನು ಇದು ಪ್ರತಿಬಿಂಬಿಸುತ್ತದೆ. ಜಾಗತಿಕ ಫ್ಯಾಷನ್ ಉದ್ಯಮದ ವ್ಯವಹಾರ ಮಾದರಿಯಲ್ಲಿ ಆಳವಾದ ಬದಲಾವಣೆ ಸಾಧ್ಯವಾದಷ್ಟು ಬೇಗ ಆಗಬೇಕಿದೆ ಎಂಬುದು ಸ್ಪಷ್ಟ. ಈಗ ಆ ಅಗತ್ಯ ಎಂದಿಗಿಂತಲೂ ಹೆಚ್ಚಾಗಿದೆ. ಏಕೆಂದರೆ ಅಗ್ಗದ ಬಟ್ಟೆ ಮತ್ತು ಅತಿಯಾದ ಗ್ರಾಹಕೀಕರಣ, ಅಗ್ಗದ ದುಡಿಮೆ ಮತ್ತು ಕಾರ್ಮಿಕರ ಮೇಲಿನ ದೌರ್ಜನ್ಯ ಎರಡೂ ಜೊತೆ ಜೊತೆಯಾಗಿ ಸಾಗುತ್ತದೆ.