ನಮ್ಮ ಬಗ್ಗೆ

ಕಾರ್ಮಿಕ ಸಂಘಟನೆಗಳು, ಕಾರ್ಮಿಕ ಕೇಂದ್ರಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಇತರ ಪ್ರತಿಪಾದಕರ ಬೃಹತ್ ಒಕ್ಕೂಟವು ಕಾನೂನುಬದ್ಧವಾದ ಮತ್ತು ಜಾರಿಗೊಳಿಸಬಹುದಾದ ವೇತನ ಒಪ್ಪಂದದ ಪ್ರಸ್ತಾಪವನ್ನು ಅಭಿವೃದ್ಧಿಪಡಿಸಲು ಮತ್ತು ಮುನ್ನಡೆಸಲು ಒಗ್ಗೂಡಿವೆ. ಮತ್ತು ನಿಮ್ಮ ಸಕ್ರಿಯ ಒಳಗೊಳ್ಳುವಿಕೆ ಮತ್ತು ಬೆಂಬಲವನ್ನು ಬಯಸುತ್ತಿವೆ.

ಈ ಪ್ರಸ್ತಾಪವನ್ನು ಮೂರು ನೆಟ್‌ವರ್ಕ್‌ಗಳು ಅಭಿವೃದ್ಧಿಪಡಿಸಿವೆ:

ಏಷ್ಯಾ ಪ್ಲೋರ್ ವೇಜ್ ಒಕ್ಕೂಟ

ಏಷ್ಯಾ ಪ್ಲೋರ್ ವೇಜ್ ಅಲೆಯನ್ಸ್ (ಎಎಫ್‌ಡಬ್ಲ್ಯೂಎ) ಏಷ್ಯಾದ ಕಾರ್ಮಿಕ-ನೇತೃತ್ವದ ಜಾಗತಿಕ ಕಾರ್ಮಿಕ ಮತ್ತು ಸಾಮಾಜಿಕ ಒಕ್ಕೂಟವಾಗಿದ್ದು, ಏಷ್ಯಾದ ಸಿದ್ಧಉಡುಪು ಉತ್ಪಾದಿಸುವ ದೇಶಗಳು ಮತ್ತು ಯುಎಸ್ಎ ಮತ್ತು ಯುರೋಪಿನ ಗ್ರಾಹಕ ಪ್ರದೇಶಗಳನ್ನು ಒಳಗೊಂಡಿದೆ. 2007 ರಲ್ಲಿ ಸ್ಥಾಪನೆಯಾದ ಎಎಫ್‌ಡಬ್ಲ್ಯೂಎ, ಜಾಗತಿಕ ಉತ್ಪಾದನಾ ಜಾಲಗಳಲ್ಲಿನ ದೇಶಾಧಾರಿತ ಹೋರಾಟಗಳ ಮಿತಿಗಳನ್ನು ನಿವಾರಿಸಲು, ಏಷ್ಯಾದ ಗಾರ್ಮೆಂಟ್ ಒಕ್ಕೂಟಗಳಲ್ಲಿ ಪ್ರಾದೇಶಿಕ ಐಕ್ಯತೆಯನ್ನು ನಿರ್ಮಿಸುತ್ತದೆ ಮತ್ತು ಜಾಗತಿಕ ಫ್ಯಾಷನ್ ಬ್ರಾಂಡ್‌ಗಳನ್ನು ಜವಾಬ್ದಾರರನ್ನಾಗಿ ಮಾಡುತ್ತದೆ. ಏಷ್ಯನ್ ಸಿದ್ಧಉಡುಪು ಕಾರ್ಮಿಕರಿಗಾಗಿ ಎಎಫ್‌ಡಬ್ಲ್ಯೂಎಯ ದೇಶದ ಗಡಿಗಳನ್ನು ಮೀರಿದ ಜೀವನಾವಶ್ಯಕ ವೇತನ ಸೂತ್ರೀಕರಣವು ಪಾವತಿಸದ ಆರೈಕೆ ವೆಚ್ಚಗಳನ್ನು ಗಣನೆಗೆ ತೆಗೆದುಕೊಳ್ಳುವ ಏಕೈಕ ಮಹಿಳಾ ಕೇಂದ್ರಿತ ಸೂತ್ರೀಕರಣವಾಗಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗ್ಯ ಮತ್ತು ಸೂಕ್ತ ಕೆಲಸಗಳಿಗಾಗಿ ಹೋರಾಟಗಳನ್ನು ಮುನ್ನಡೆಸಲು ಎಎಫ್‌ಡಬ್ಲ್ಯೂಎ ಮಹಿಳಾ ಗಾರ್ಮೆಂಟ್ ಕಾರ್ಮಿಕ ನಾಯಕರನ್ನು ರೂಪಿಸುತ್ತದೆ ಮತ್ತು ಉದ್ಯೋಗ ಸಂಬಂಧಗಳನ್ನು ಮನೆಕೆಲಸಗಾರರನ್ನೂ ಒಳಗೊಂಡಿರುವಂತ ವಿಸ್ತರಿಸುವ ಕಲ್ಪನೆಗೆ ಬದ್ಧವಾಗಿದೆ.

ಕ್ಲೀನ್ ಕ್ಲೋತ್ಸ್ ಕ್ಯಾಂಪೇನ್ 

ಕ್ಲೀನ್ ಕ್ಲೋತ್ಸ್ ಕ್ಯಾಂಪೇನ್ (ಸಿಸಿಸಿ) ಎಂಬುದು ಒಂದು ಜಾಗತಿಕ ನೆಟ್‌ವರ್ಕ್. ಇದು ಕೆಲಸದ ವಾತಾವರಣವನ್ನು ಸುಧಾರಿಸಲು ಮತ್ತು ಜಾಗತಿಕ ಉಡುಪು ಮತ್ತು ಕ್ರೀಡಾ ಉಡುಪು ಉದ್ಯಮಗಳಲ್ಲಿ ಕಾರ್ಮಿಕರ ಸಬಲೀಕರಣಕ್ಕೆ ಮೀಸಲಾಗಿದೆ. ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಗೌರವಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ 1989 ರಿಂದ ಸಿಸಿಸಿ ಕೆಲಸ ಮಾಡುತ್ತಿದೆ. ಗ್ರಾಹಕರು, ಲಾಬಿ ಕಂಪನಿಗಳು ಮತ್ತು ಸರ್ಕಾರಗಳಲ್ಲಿ ಸಿಸಿಸಿ ಅರಿವು ಮೂಡಿಸುತ್ತದೆ ಮತ್ತು ಅವರನ್ನು ಒಗ್ಗೂಡಿಸುತ್ತದೆ. ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಡುವಾಗ ಮತ್ತು ಉತ್ತಮ ಕೆಲಸದ ವಾತಾವರಣಕ್ಕಾಗಿ ಬೇಡಿಕೆ ಸಲ್ಲಿಸುವಾಗ ಅವರಿಗೆ ನೇರ ಬೆಂಬಲವನ್ನು ನೀಡುತ್ತದೆ. ಇದು ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು, ಮಹಿಳೆಯರ ಹಕ್ಕುಗಳು, ಗ್ರಾಹಕರ ವಕಾಲತ್ತು ಮತ್ತು ಬಡತನ ನಿರ್ಮೂಲನೆ ಸೇರಿದಂತೆ ಹಲವು ದೃಷ್ಟಿಕೋನಗಳು ಮತ್ತು ಹೋರಾಟಗಳಲ್ಲಿ ತೊಡಗಿರುವ ಟ್ರೇಡ್ ಯೂನಿಯನ್‌ಗಳು ಮತ್ತು ಎನ್‌ಜಿಒಗಳನ್ನು ಸಿಸಿಸಿ ಒಟ್ಟುಗೂಡಿಸುತ್ತದೆ.  

ವರ್ಕರ್ ಡ್ರಿವನ್ ಸೋಷಿಯಲ್
ರೆಸ್ಪಾನ್ಸಿಬಿಲಿಟಿ ನೆಟ್‌ವರ್ಕ್

ವರ್ಕರ್ ಡ್ರಿವನ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ನೆಟ್‌ವರ್ಕ್ (ಡಬ್ಲ್ಯುಎಸ್‌ಆರ್‌ಎನ್) ಎನ್ನುವುದು ಕಾರ್ಪೊರೇಟ್ ಪೂರೈಕೆ ಸರಪಳಿಗಳಲ್ಲಿ ಮೂಲಭೂತ ಮಾನವ ಹಕ್ಕುಗಳನ್ನು ರಕ್ಷಿಸಲು, ಪರಿಣಾಮಕಾರಿ ಮತ್ತು ನವೀನ ಮಾದರಿಯನ್ನು ಉತ್ತೇಜಿಸಲು ಒಟ್ಟಾಗಿ ಕೆಲಸ ಮಾಡುವ ಕಾರ್ಮಿಕ ಸಂಘಟನೆಗಳು, ಸಹಾಯಕ ಒಕ್ಕೂಟಗಳು ಮತ್ತು ತಾಂತ್ರಿಕ ಸಲಹೆಗಾರರ ​ಒಂದು ​ಜಾಲವಾಗಿದೆ. ಕಾರ್ಮಿಕ-ಚಾಲಿತ ಸಾಮಾಜಿಕ ಜವಾಬ್ದಾರಿ ಎಂದು ಕರೆಯಲ್ಪಡುವ ಈ ವಿಧಾನವು ಕಾರ್ಮಿಕರ ನೇತೃತ್ವದ ಪ್ರಯತ್ನಗಳಿಂದ ಹೊರಹೊಮ್ಮಿದ್ದು, ಇದರಲ್ಲಿ ಬಾಂಗ್ಲಾದೇಶದ ಗಾರ್ಮೆಂಟ್ ಕ್ಷೇತ್ರದಲ್ಲಿನ ಅಕಾರ್ಡ್ ಆನ್ ಫೈರ್ ಅಂಡ್ ಬಿಲ್ಡಿಂಗ್ ಸೇಫ್ಟಿ (ಬೆಂಕಿ ಮತ್ತು ಕಟ್ಟಡ ಸುರಕ್ಷತೆ ಒಪ್ಪಂದ) ಮತ್ತು ಯುಎಸ್ ಕೃಷಿ ಕ್ಷೇತ್ರದಲ್ಲಿನ ಫೇರ್ ಫುಡ್ ಪ್ರೋಗ್ರಾಂ(ನ್ಯಾಯಯುತ ಆಹಾರ ಕಾರ್ಯಕ್ರಮ) ಕೂಡ ಸೇರಿವೆ. ಈ ಮಾದರಿಯನ್ನು ಇತರ ವಲಯಗಳಿಗೆ ಮತ್ತು ಪ್ರದೇಶಗಳಿಗೆ ವಿಸ್ತರಿಸುವ ತಂತ್ರವನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯಗತಗೊಳಿಸಲು ಬಹು-ಶಿಸ್ತಿನ WSR ನೆಟ್‌ವರ್ಕ್ ಅನ್ನು ರಚಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಹಲವು ಪಾಲುದಾರರಲ್ಲಿ ಈ ಮಾದರಿಯ ಬಗ್ಗೆ ತಿಳುವಳಿಕೆಯನ್ನು ಬೆಳೆಸುವುದು, ಮಾದರಿಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕಾರ್ಮಿಕರ ನೇತೃತ್ವದ ಪ್ರಯತ್ನಗಳಿಗೆ ಬೆಂಬಲ ಮತ್ತು ಸಂಪನ್ಮೂಲಗಳನ್ನು ಒದಗಿಸುವುದು ಮತ್ತು ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಕಾರ್ಮಿಕರ ಹಕ್ಕುಗಳ ಕಾರ್ಯಕ್ರಮಗಳಿಗೆ ಈ ಮಾದರಿಯನ್ನು ಮೂಲಾಧಾರವಾಗಿ ಸ್ಥಾಪಿಸುವ ಮೂಲಕ ಚಿಂತನೆಯನ್ನು ಬದಲಾಯಿಸುವುದು ಈ ನೆಟ್‌ವರ್ಕ್‌ನ ಗುರಿಯಾಗಿದೆ.